‘ರಿಕ್ತಕ್ಕೆ ಯು/ಎ ಪ್ರಮಾಣಪತ್ರ
Posted date: 23 Fri, Sep 2016 – 10:50:08 AM

ಅಮೃತ್ ಕುಮಾರ್ ನಿರ್ದೇಶನದ ‘ರಿಕ್ತ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು\ಎ ಸರ್ಟಿಫಿಕೇಟ್ ಕೊಟ್ಟಿದೆ. ಹಾರರ್ ಚಿತ್ರವೊಂದಕ್ಕೆ ಈ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಸಹಜವಾಗೇ ಚಿತ್ರತಂಡದವರು ಸಂತಸಗೊಂಡಿದ್ದಾರೆ.
 ರಿಕ್ತ ಹಾರರ್ ಮೂವಿ. ಇದಕ್ಕೆ ಯು\ಎ ಸರ್ಟಿಫಿಕೆಟ್ ಸಿಕ್ಕಿರುವುದೇ ಅಚ್ಚರಿ. ಅದು ಸಾಧ್ಯವಾಗಿರುವುದು ಇಡೀ ಚಿತ್ರದ ಗುಣಮಟ್ಟ ಮತ್ತು ವೈಶಿಷ್ಟ್ಯಗಳಿಂದ ಎನ್ನುವುದು ಚಿತ್ರದ ನಿರ್ದೇಶಕ ಅಮೃತ್ ಕುಮಾರ್ ಅವರ ನಂಬಿಕೆ.
    ಇದು ಅಮೃತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದ ಟ್ರೇಲರ್ ಪೋಸ್ಟರ್ ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೆ ಭರವಸೆ ಮೂಡಿಸಿದೆ. ಇನ್ನುಳಿದಂತೆ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡಿರೋದು ರಿಕ್ಕಿ ಸೋನು. ರಿಕ್ತ ಚಿತ್ರದ ಮೂಲಕ ಸಂಚಾರಿ ವಿಜಯ್ ಗಾಯಕರಾಗಿಯೂ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಅರುಣ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದ ಹಾರರ್ ಟ್ರೆಂಡ್‌ಗೆ ತಕ್ಕಂತೆ ರಿಕ್ತ ಸಿನಿಮಾ ತಯಾರಾಗಿದ್ದರೂ ಅವೆಲ್ಲಕ್ಕಿಂತಲೂ ಭಿನ್ನವಾಗಿದೆ ಎಂಬುದನ್ನು ಸೆನ್ಸಾರ್ ಪ್ರಮಾಣ ಪತ್ರವೇ ಸಾಕ್ಷೀಕರಿಸುತ್ತದೆ.
    ಒಟ್ಟಾರೆಯಾಗಿ ಯಾವುದೇ ಪಾತ್ರವನ್ನಾದರೂ ಆವಾಹಿಸಿಕೊಂಡು ನಟಿಸುವ ಸಂಚಾರಿ ವಿಜಯ್ ದೆವ್ವದ ಪಾತ್ರದಲ್ಲಿ ನಟಿಸಿರುವುದು ವಿಶೇಷ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed